​ಕನ್ನಡ ಸಂಘ ಟೊರೊಂಟೊ


​​​​   Kannada Sangha Toronto           

ಪ್ರೀತಿಯ ಕನ್ನಡ ಬಂಧು ಭಗಿನಿಯರೇ, ಸಪ್ರೇಮ ವಂದನೆಗಳು.

ಪ್ರಸ್ತುತ ೨೦೧೯-೨೦ರ ಕಾರ್ಯಕಾರಿ ಸಮಿತಿಯ ರಚನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾದ ಎಲ್ಲಾ ಸದಸ್ಯರಿಗೂ ಹಾಗೂ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ಪದ್ಮಜಂಗಮಕೋಟೆ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು.

ಕನ್ನಡ ನುಡಿ, ನಾಡಿನ ಸೇವೆ ಹಾಗು ಟೊರೊಂಟೊ ಕನ್ನಡಿಗರ ಶ್ರೇಯಾಕಾಂಕ್ಷೆಗಳನ್ನು ಪರಮಧ್ಯೇಯವಾಗಿರಿಸಿರುವ ಈ ವರ್ಷದ ಕಾರ್ಯಕಾರಿಸಮಿತಿಯ ಎಲ್ಲಾ ಸಹಪದಾಧಿಕಾರಿಗಳಿಗೂ,ಯುವ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು.

ಈ ಸಮಿತಿಯು ಸ್ಥಳೀಯ ಹಾಗೂ ತಾಯ್ನಾಡ ವಿದ್ಯಮಾನಗಳಿಗೆ ಯಥೋಚಿತವಾಗಿ ಸ್ಪಂದಿಸುವುದಲ್ಲದೇ ಕನ್ನಡ ಸಂಘದ ಜನತೆಯ ಶ್ರೇಯೋಭಿವೃದ್ಧಿಗೂ ಶ್ರಮಿಸಲು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದೆ.

ಕನ್ನಡ ಸಂಘ ಟೊರೊಂಟೋದ ಮೂಲಧ್ಯೇಯೋದ್ದೇಶಗಳನ್ನುಪರಿಗಣಿಸಿ, ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಹಮ್ಮಿಕೊಳಲಾಗಿದೆ. ಸ್ಥಳೀಯ ಕನ್ನಡಿಗರ ಹಾಗೂ ಅನೇಕ ದೇಶೀಯ ಸಂಸ್ಥೆಗಳ ಒಡನಾಟ ಹಾಗೂ ಬಾಂಧವ್ಯವನ್ನು ವೃದ್ಧಿಸುವ ಸದಾಶಯಹೊಂದಿದ್ದೇವೆ. 

ಗರಿಷ್ಠತಮ ಯುವ ಸದಸ್ಯರನ್ನೊಳಗೊಂಡ ಈ ಸಮಿತಿಯು ಯುವ ಕನ್ನಡಿಗರಿಗಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದೆ. ಸದೃಢ,ಬೃಹತ್ಕನ್ನಡ ಸಮಾಜದ ನಿರ್ವಹಣೆಯಲ್ಲಿ ಶ್ರಮಿಸಿದ ಅನೇಕ ಹಿರಿಯರ ಆಸಕ್ತಿ, ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಈ ಹಳೆಬೇರು- ಹೊಸಚಿಗುರ ನಡುವಣ ಸಂವಹನಶಕ್ತಿಯಾಗಿ, ನೀರೆರೆದು, ನಾವೆಲ್ಲ ಒಂದಾಗಿದುಡಿಯೋಣ.ಆ ನಿಟ್ಟಿನಲ್ಲಿ ಸಮಿತಿಯು ತಾವೆಲ್ಲ ಬಂಧು ಭಗಿನಿಯರ ಹೃತ್ಪೂರ್ವಕಸಹಕಾರ, ಸಹಾಯವನ್ನುಕೋರುತ್ತದೆ.

ಭಾರತದ ೭೩ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪನೋರಮಾ ಇಂಡಿಯಾ ಇದೇ  ರವಿವಾರ ಅಗಷ್ಟ ೧೮ ರoದು ನೇಥನ್ಫಿಲಿಪ್ಸ್ಕ್ವೇರ್ನಲ್ಲಿ  ಆಯೋಜಿಸಿರುವ ಇಂಡಿಯಾಡೇ ಪರೇಡ್ನಲ್ಲಿ ಕನ್ನಡ ಸಂಘವು ಭಾಗವಹಿಸಲಿದ್ದು, ಹೆಮ್ಮೆಯಿಂದ ಪಾಲ್ಗೊಳ್ಳಲು ತಮ್ಮೆಲ್ಲರನ್ನೂ ಆಹ್ವಾನಿಸುತ್ತೇವೆ.

ಈ ವರ್ಷದ ಗಣೇಶ ಹಬ್ಬವನ್ನು ಶನಿವಾರ, ಸೆಪ್ಟೆಂಬರ್೭, ೨೦೧೯ ರಂದು ಶೃಂಗೇರಿಯ ಮಂದಿರದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ೯ ರಿಂದ ಪ್ರಾರಂಭವಾಗುವ ಪೂಜೆ, ಭಜನೆ, ಮಕ್ಕಳಿಂದ ಮೂರ್ತಿ ಹಾಗೂ ಚಿತ್ರತಯಾರಿ, ಕಿರುನಾಟಕ, ಸಂಗೀತ, ನೃತ್ಯಸೇವೆ ಇತ್ಯಾದಿ ಚಟುವಟಿಕೆಗಳಲ್ಲಿ ತಾವೆಲ್ಲ ಬಂದು ಭಾಗಿಯಾಗಿರೆಂದು ಆತ್ಮೀಯವಾಗಿ ಆಮಂತ್ರಿಸುತ್ತೇವೆ.

ಹೀಗೆಯೇ ಹಬ್ಬದ ಸಂಭ್ರಮ ಸಡಗರಗಳು ತಾಯ್ನಾಡಲ್ಲಿ ಅನೇಕ ಮನೆಗಳಲ್ಲಿ ಇಂದು ಕಾಣಲಾಗದು. ಕಳೆದ ಹಲವು ದಿನಗಳಲ್ಲಿ ಹಿಂದೆಂದೂ ಕಾಣದ ಅತಿವೃಷ್ಟಿಗೆ ತತ್ತರಿಸಿರುವ ಕರ್ನಾಟಕದ ಜನತೆ ಭವಿಷ್ಯದ ಕುರಿತು ಚಿಂತಾಕ್ರಾಂತರಾಗಿರುವ ಪರಿಸ್ಥಿತಿಯೊದಗಿದೆ. ಮಾನವ ಸಹಜ ಕರ್ತವ್ಯ ನಮ್ಮಲ್ಲನೇಕರನ್ನು ಸಹಾಯಕ್ಕಾಗಿ ಪ್ರೇರೇಪಿಸಿದೆ. ಕನ್ನಡ ಸಂಘವೂ ಸಹ ಸ್ಥಳೀಯ ದಾನಿಗಳ ನೆರವುಕೋರಿ, ಕಲೆ ಹಾಕಲಾಗುವ ಮೊತ್ತವನ್ನು ಉಚಿತವಾದ ಕಾರ್ಯಗಳಿಗೆ ಕಳುಹಿಸಿಕೊಡುವ ಸಂಕಲ್ಪಹೊಂದಿದೆ. ತಾವೆಲ್ಲಾ ಆಸಕ್ತ ದಾನಿಗಳು ಶೀಘ್ರವಾಗಿ ಸಹಾಯಹಸ್ತರಾಗಬೇಕಾಗಿ ವಿನಂತಿ. ನಗದು,ಚೆಕ್ಗಳನ್ನೂ ಸಂಘದ ಪ್ರಸ್ತುತ  ಗಣೇಶಹಬ್ಬದಸಂದರ್ಭದಲ್ಲಿ, ಹಾಗೂ ಈಮೇಲ್ಮೂಲಕವೂ ಹಣವನ್ನು ಸ್ವೀಕರಿಸಲಾಗುವುದು (Email:kst.president@gmail.com).

ಕಡೆಯದಾಗಿ, ಈ ವರ್ಷದ ಎಲ್ಲಾ ಕಾರ್ಯಕಲಾಪಗಳಲ್ಲಿಭಾಗಿಯಾಗಿ, ಕನ್ನಡ ಸಂಘದ ಸ್ಥಾಯಿ ಅಥವಾ ವಾರ್ಷಿಕ ಸದಸ್ಯತ್ವ ಸ್ವೀಕರಿಸಿ ಎಂದು ಸವಿನಯ ವಿನಂತಿ.
  
ಇಂತಿ ತಮ್ಮ ವಿಶ್ವಾಸಿ,
ವಿನಾಯಕ ಹೆಗಡೆ
ಅಧ್ಯಕ್ಷ,ಕನ್ನಡ ಸಂಘ ಟೊರೊಂಟೊ